Saturday, July 26, 2008

at 9:01 PM Posted by Suresha 0 comments

ಮತ್ತೆರಡು ಕಡೆ ಸರಣಿ ಸ್ಪೋಟ ಸಂಭವಿಸಿದೆ. ಮೊದಲು ಬೆಂಗಳೂರು, ನಂತರ ಅಹಮದಾಬಾದ್. 2 ದಿನಗಳಲ್ಲಿ 25 ಬಾಂಬ್ ಸ್ಪೋಟಗಳು ಸಂಭವಿಸಿವೆ. ಸಾಕಷ್ಟು ಅಮಾಯಕ ಜೀವಗಳು ಬಲಿಯಾಗಿವೆ.

ಆದರೂ ಇನ್ನೂ ಸಾಕಷ್ಟು ಪ್ರಶ್ನೆಗಳು ಹಾಗೆ ಉಳಿದಿವೆ. ಈ ಸ್ಪೋಟಗಳ ಹಿಂದೆ ಯಾರ ಕೈವಾಡ ಇದೆ? ಪೋಲಿಸ್ ಇಲಾಖೆಗೆ ಇದರ ಬಗ್ಗೆ ಯಾಕೆ ಮುನ್ಸೂಚನೆ ಸಿಗಲಿಲ್ಲ? ಇವನ್ನೆಲ್ಲ ತಡೆಯಲು ಸಾಧ್ಯವೇ ಇಲ್ಲವೇ? ಇನ್ನಾದರೂ ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆಯೇ? ಜನರ ಜೀವಗಳಿಗೆ ಬೆಲೆಯೇ ಇಲ್ಲವೇ?

ಇವೆಲ್ಲವುಗಳಿಗೆ ಉತ್ತರ ಹುಡುಕುತ್ತ, ಉಗ್ರಗಾಮಿಗಳ ಈ ಹೇಯ ಕ್ರತ್ಯ ಖಂಡಿಸಿ, ಇಂಥ ಘಟನೆಗಳು ಮುಂದೆ ಮರುಕಳಿಸದಿರಲಿ ಎಂದು ಆಶಿಸುವ.

Monday, July 21, 2008

ಸಮಯ: ಮದ್ಯಾನ 12 ಗಂಟೆ
ಆಫೀಸಿನಲ್ಲಿ ಇ - ಮೇಲ್ ನೋಡುತ್ತಾ ಕೆಲಸ ಇನ್ನೇನು ಶುರು ಮಾಡಬೇಕು ಅನ್ನುವಷ್ಟರಲ್ಲೇ ನನ್ನ ಗೆಳೆಯ ಫೋನಯಿಸಿದ. ಮುಂದಿನ ವಾರ - ಅಂತ್ಯಕ್ಕೆ ಮಂಗಳೂರಿಗೆ ಹೋಗುವ ಪ್ಲಾನ್ ಬಗ್ಗೆ ತಿಳಿಸಿದ. ಆದರೆ ಮಂಗಳೂರಿನಲ್ಲಿ ಮಳೆ ಬರುವ ಸಾದ್ಯತೆ ಇದ್ದ ಕಾರಣ ಶಿವಮೊಗ್ಗೆಗೆ ಹೋಗುವ ಪ್ಲಾನ್ ಮಾಡಿದೆವು.
ಜೋಗ ಜಲಪಾತ, ಶಿವಮೊಗ್ಗ್ ಹತ್ತಿರದ ಪ್ರವಾಸಿ ಸ್ಥಳಗಳ ಮ್ಯಾಪ್ ತಯಾರಿಸಿಕೊಂಡು ಆಫೀಸಿನ 6 ಮಂದಿ 4 ಬೈಕ್ಗಳಲ್ಲಿ ಹೋಗುವ ನಿರ್ಧಾರ ಮಾಡಿದೆವು.

ದಿನಾಂಕ: 18 - ಜುಲೈ - 2008
ಸಮಯ: ಬೆಳಿಗ್ಗೆ 4:30
ಸ್ತಳ: BTM ಲೇಔಟ್,ಬೆಂಗಳೂರು
ಬ್ಯಾಗುಗಳನ್ನು ಬೈಕಿಗೆ ಕಟ್ಟಿ, ಪ್ರಯಾಣ ಆರಂಬಿಸಿದೆವು. ಬೆಳಿಗ್ಗೆ ತುಮಕೂರಿನಲ್ಲಿ ತಿಂಡಿ ಮುಗಿಸಿ ಮತ್ತೆ ಪ್ರಯಾಣ ಆರಂಬಿಸಿದೆವು. ಮತ್ತೆ ಮಧ್ಯದಲ್ಲಿ ಒಂದೆರಡು ಚಹಾ ವಿರಾಮ ತೆಗೆದುಕೊಂಡು ಮದ್ಯಾನ 2 ಘಂಟೆ ಸುಮಾರಿಗೆ ಶಿವಮೊಗ್ಗ ತಲುಪಿದೆವು.

ಸಮಯ: ಮಧ್ಯಾನ 4:30
ಊಟ ಮುಗಿಸಿ ತ್ಯವರೇಕೊಪ್ಪ ಹುಲಿ - ಸಿಂಹ ಸಫಾರಿಗೆ ತೆರಳಿದೆವು. ಅಲ್ಲಿ ಹುಲಿ, ಸಿಂಹ ಮತ್ತು ಜಿಂಕೆಗಳನ್ನು ಸಫಾರಿಯಲ್ಲಿ ನೋಡುವ ಅವಕಾಶ ಸಿಕ್ಕಿತು. ಅಲ್ಲಿ ಒಂದು zoo ಕೂಡ ಇದೆ. ಆದರೆ ಅದು ಹೆಚ್ಹು ಆಕರ್ಶಕವಾಗಿಲ್ಲದ ಕಾರಣ ಅಲ್ಲಿಂದ ಬೇಗ ಹೊರಟೆವು.

ಸಂಜೆ ಹೋಟೆಲ್ ರೂಮ್ ಸೇರಿ ಸ್ವಲ್ಪ ಹರಟೆ ಹೊಡೆದು ಊಟ ಮುಗಿಸಿ ಮಲಗಿದೆವು.

ದಿನಾಂಕ: 19 - ಜುಲೈ
ಸಮಯ: ಬೆಳಿಗ್ಗೆ 6 ಗಂಟೆ
ಅಲಾರಂನ ಕರ್ಕಶ ಸದ್ದು ಕೇಳಿ ಎದ್ದೆವು. ಚಹಾ-ತಿಂಡಿ ಮುಗಿಸಿ ಜೋಗ ಜಲಪಾತದ ಕಡೆ ಪ್ರಯಾಣ ಬೆಳೆಸಿದೆವು. ಜೋಗ ಜಲಪಾತವು ಶಿವಮೊಗ್ಗದಿಂದ ಸುಮಾರು 120 ಕಿ.ಮಿ. ದೂರದಲ್ಲಿದೆ. ಸುಂದರವಾದ ಪ್ರಕ್ರತಿಯ ಇಕ್ಕೆಲಗಳಿಂದ ಕೂಡಿದ ರಸ್ತೆಯ ಮೇಲೆ ಬೈಕ್ ಪ್ರಯಾಣ ಆನಂದದಾಯಕವಾಗಿತ್ತು. ಮದ್ಯದಲ್ಲಿ ಸಾಕಷ್ಟು ಕಡೆ ಫರಂಗಿ ಹಣ್ಣು ರಸ್ಥೆಯ ಇಕ್ಕೆಲಗಳಲ್ಲಿ ಮಾರುತಿದ್ದುದು ಕಂಡು ಬಂತು. ಅಂಥ ಒಂದು ಕಡೆ ನಿಂತು ಫರಂಗಿ ಹಣ್ಣಿನ ರುಚಿ ಸವಿದು ಮತ್ತೆ ಪ್ರಯಾಣ ಬೆಳೆಸಿದೆವು.
ಮಧ್ಯಾನ 12 ಗಂಟೆ ಸುಮಾರಿಗೆ ಜೋಗ ತಲುಪಿದೆವು. ಜಲಪಾತದಲ್ಲಿ ಸಾಕಷ್ಟು ನೀರಿಲ್ಲದಿದ್ದರೂ ಜಲಪಾತದ ದ್ರಶ್ಯ ರೋಮಾಂಚಕವಾಗಿತ್ತು. ಮೋಡ ಕವಿದ ವಾತಾವರಣ ಇದ್ದ ಕಾರಣ ಗುಡ್ಡದ ಮೇಲೆ ಮಂಜು ಕವಿದಂತ ದ್ರಶ್ಯ ಆಕರ್ಷಕವಾಗಿತ್ತು. ಸಮಯದ ಅಭಾವವಿದ್ದ ಕಾರಣ ಜಲಪಾತದ ಕೆಳಗಿನ ಚಾರಣದ ಅವಕಾಶ ಸಿಗಲ್ಲಿಲ್ಲ. ಜಲಪಾತದ ತಳಕ್ಕೆ ಚಾರಣ ಮಾಡಲು ಸುಮಾರು 30 ನಿಮಿಷ ಹಾಗೂ ಮತ್ತೆ ಮೇಲೆ ಬರಲು 1.30 ಗಂಟೆ ಬೇಕಾಗುವುದೆಂದು ಗೈಡ್ ಗಳಿಂದ ತಿಳಿದು ಬಂತು. ಅಲ್ಲದೆ ಮುಂಗಾರು ಮಳೆ ಪಾಯಿಂಟ್ (ಜಲಪಾತದ ಮೇಲಿನ ಪಾಯಿಂಟ್) ಗೂ ಹೋಗುವ ಅವಕಾಶ ಸಿಗಲ್ಲಿಲ್ಲ.

ಅಲ್ಲಿಂದಲೇ ಹೊನ್ನೇಮರಡುಗೆ ಹೋಗುವ ದಾರಿ ಕೇಳಿಕೊಂಡು ಹೊರಟೆವು. ಹೊನ್ನೇಮರಡುಗೆ ಹೋಗುವ ರಸ್ತೆ ಡಾಂಬರು ಕಾಣದೆ ದುರವಸ್ಥೆಯಲ್ಲಿತು. ನಮ್ಮ ಪ್ರಯಾಣದ ಕೊನೆಯ 300 ಮೀಟರ್ ದಾರಿ ಕೆಸರಿನಿಂದ ಕೂಡಿದ್ಹು ಬೈಕ್ ಸವಾರಿಗೆ ಯೋಗ್ಯವಗಿಲ್ಲದ ಕಾರಣ ಬೈಕನ್ನು ಅಲ್ಲೇ ನಿಲ್ಲಿಸಿ, ಕಾಲ್ದಾರಿಯಲ್ಲಿ ಪ್ರಯಾಣ ಬೆಳೆಸಿದೆವು. ಅಲ್ಲಿ ಅದ್ವೆ೦ಚುರ ಬೆಂಗಳೊರೆನ ಸಾಹಸಿಗಳು ನಮ್ಮನ್ನು ಬರಮಾಡಿಕೊಂಡರು.
ಹೊನ್ನೇಮರಡು ಲಿಂಗನಮಕ್ಕಿ ಅಣೆಕಟ್ಟಿನಿಂದ ಜಲವ್ರತವಾದ ಪ್ರದೇಶವಾಗಿದೆ. ಸಂಪೂರ್ಣ ಹಳ್ಳಿಯೇ ಜಲವ್ರತವಾಗಿದ್ದು, ನೀರಿನ ಮಧ್ಯ ಬರಿ ಒಣಗಿರುವ ಮರಗಳನ್ನು ನೋಡಬಹುದು. ಅಲ್ಲದೆ ಅಲ್ಲಲ್ಲಿ ನೀರಿನ ಮಧ್ಯ ಹಸಿರು ಮರಗಳಿಂದ ಕೂಡಿದ ದ್ವೀಪಗಳು ನೋಡುಗರನ್ನು ಕೈ ಭೀಸಿ ಕರೆಯುವಂತಿತ್ತು. ಈ ದ್ವೀಪಗಳಲ್ಲಿ ಕ್ಯಾಂಪ್-ಇಂಗ್ ನಡೆಸುವರೆಂದು ತಿಳಿದು ಬಂತು. ಅಲ್ಲಿದ್ದ ಸಾಹಸಿ ಬಳಗದವರು ನೀರಿನಲ್ಲಿ ಉಚಿತ ಬೋಟಿಂಗ್-ನ ಅವಕಾಶ ಮಾಡಿಕೊಟ್ಟರು. ಅವರಿಗೆ ಧನ್ಯವಾದ ಸಲ್ಲಿಸಿ ಅಲ್ಲಿಂದ ಬೈಕ್-ಗಳ ಕಡೆಗೆ ಹೊರಟೆವು. ಅಲ್ಲಿಂದ ಹೊರಟು ಸಾಗರದಲ್ಲಿ ಸಂಜೆ ತಿಂಡಿ ಮುಗಿಸಿ ಶಿವಮೊಗ್ಗಕ್ಕೆ ವಾಪಾಸಾದೆವು.

ದಿನಾಂಕ: 20 - ಜುಲೈ
ಸಮಯ: ಬೆಳಿಗ್ಗೆ 6 ಗಂಟೆ
ಗಾಡ ನಿದ್ರೆಯಲ್ಲಿರುವಾಗ ಜೊತೆಗಾರ ಬಂದು ಎಬ್ಬಿಸಿದಾಗ ಸಿಟ್ಟಿನಿಂದಲೇ ಎದ್ದೆವು. ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಸಕ್ರೆಬೈಲು ಅನೆ ತರಬೇತಿ ಕೇಂದ್ರದ ಕಡೆಗೆ ಹೊರಟೆವು. ಇದು ಶಿವಮೊಗ್ಗದಿಂದ 15 ಕಿ.ಮಿ ದೂರದಲ್ಲಿದೆ. ಅಲ್ಲಿ ಸುಮಾರು 15 ಕಾಡನೆಗಳನ್ನೂ ಪಳಗಿಸಿ ತರಬೇತಿ ಕೊಡಲಾಗುತ್ತಿತ್ತು. ಅಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದುದನ್ನು ನೋಡಿ ವಾಪಾಸಾದೆವು.
ನಮ್ಮ ಮುಂದಿನ ಪ್ರಯಾಣ ಮಂಡಗದ್ದೆ ಪಕ್ಷಿ-ಧಾಮದ ಕಡೆಗೆ. ಅಲ್ಲಿ ಎರಡು ಮರಗಳಲ್ಲಿ ಸಾಕಷ್ಟು ಪಕ್ಷಿಗಳು ಮನೆ ಮಾಡಿದ್ದವು. ಅದನ್ನು ನೋಡಿ, ಶಿವಮೊಗ್ಗದ ಕಡೆ ವಾಪಾಸಾದೆವು.

ಸಮಯ: 2 ಗಂಟೆ
ಎಲ್ಲ ಸಾಮಾನುಗಳನ್ನೂ ಪ್ಯಾಕ್ ಮಾಡಿ, ಬೆಂಗಳೂರಿನ ಕಡೆಗೆ ಬೈಕ್ ಸವಾರಿ ಹೊರಟೆವು.
ಪಶ್ಚಿಮ ಘಟ್ಟ ಪ್ರೆದೆಶಗಳಲ್ಲಿ ಅಲೆದಾಡುವಾಗ ಎಲ್ಲಿಯೂ ಮಳೆ ಜಾಸ್ತಿಯಾಗಿ ನಮ್ಮನ್ನು ಕಾಡಿರಲ್ಲಿಲ್ಲ. ಆದರೆ ಬೆಂಗಳೂರು ಸಮೀಪಿಸುತ್ತಿದ್ದಂತೆ ಭಾರಿ ಮಳೆ ನಮ್ಮನ್ನು ಭರ ಮಾಡಿಕೊಂಡಿತು. ಮಳೆಯಲ್ಲಿ ನೆನೆದುಕೊಂಡೆ ಬೈಕ್ ಚಲಾಯಿಸಿ ಬೆಂಗಳೂರು ತಲುಪಿದೆವು.
ಮನೆ ತಲುಪಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆ ಶಿವಮೊಗ್ಗದ ಸುಂದರ ದ್ರಶ್ಯಗಳ ಮೆಲುಕು ಹಾಕುತ್ತ ಮುಂದಿನ ಪ್ರಯಾಣದ ಬಗ್ಗೆ ಯೋಚಿಸತೊಡಗಿದೆವು.