Wednesday, August 6, 2008

ಭಾರತದಲ್ಲಿ ಐಫೋನ್ 3ಜಿ ಆಗಸ್ಟ್ 22ರಂದು ಮಾರಟಕ್ಕೆ ಬಿಡುಗಡೆಯಾಗಲಿದೆ. ಏರ್ಟೆಲ್ ಮತ್ತು ವೋಡಫೋನ್-ಗಳೆರಡೂ ಒಂದೇ ದಿನ ಇದನ್ನು ಗ್ರಾಹಕರಿಗೆ ಬಿಡುಗಡೆ ಮಾಡಲಿವೆ.

ಆದರೆ ಎರಡೂ ಕಂಪೆನಿಗಳು ಇದರ ಬೆಲೆ ಇನ್ನೂ ಘೋಷಿಸಿಲ್ಲ. ಆದರೆ ಇದು ಅಮೇರಿಕಾದಲ್ಲಿನ 200$-ಗಿಂತ ಜಾಸ್ತಿಯಿರುವ ಸಾಧ್ಯತೆಗಳು ನಿಚ್ಚಳವಾಗಿವೆ. ಅನುಮಾನಗಳ ಪ್ರಕಾರ ಇದರ ಬೆಲೆ ಸುಮಾರು ರೂ 20000 .

ಅಮೆರಿಕದಲ್ಲಿ ಹೊಸ ಅಲೆ ಎಬ್ಬಿಸಿದ ಈ ಮೊಬೈಲ್ ಭಾರತದಲ್ಲಿ ಯಾವ ಮೋಡಿ ಮಾಡುತ್ತದೋ ಕಾದು ನೋಡಬೇಕು. ನಾನಂತೂ ಬಹಳ ಉತ್ಸುಕತೆಯಿಂದ ಕಾಯುತಿದ್ದೇನೆ.

0 comments: