ಬ್ಲಾಗರ್-ನೊಬ್ಬ ಗೂಗಲ್ ಕಂಪೆನಿಗೆ ಕಿರಿಕ್ ತಂದಿಟ್ಟಿದ್ದಾನೆ. ಮುಂಬೈ ಮೂಲದ "Gremach Infrastructure Equipments & Projects" ಎಂಬ ಕಂಪನಿಯು ಗೂಗಲ್ ವಿರುದ್ದ ಮುಂಬೈ ಹೈಕೋರ್ಟ್ನಲ್ಲಿ ಮಾನ ನಷ್ಟ ಮೊಕದ್ದಮೆ ಹೂಡಿದೆ. ಇದಕ್ಕೆಲ್ಲ ಕಾರಣ ಬ್ಲಾಗರ್ ಮಹಾಶಯನೊಬ್ಬ ಗೂಗಲ್ ಒಡೆತನದ "ಬ್ಲಾಗರ್" ವೆಬ್-ಸೈಟಿನಲ್ಲಿ ಬರೆದ ಲೇಖನ. ಈತ ಕಂಪೆನಿಯ ಆಫ್ರಿಕಾದಲ್ಲಿನ ಗಣಿಗಾರಿಕೆ ಬಗ್ಗೆ ಕೆಟ್ಟದಾಗಿ ಬರೆದಿದ್ದಾನೆ೦ಬುದು ಕಂಪೆನಿಯ ಗೋಳು.
ಮುಂಬೈ ಹೈಕೋರ್ಟ್ ಮೊದಲ ವಿಚಾರಣೆ ವೇಳೆ ಬ್ಲಾಗರ್-ನ ವಿವರಗಳನ್ನು ಕೋರ್ಟ್ಗೆ ಒಪ್ಪಿಸುವಂತೆ ಆದೇಶಿಸಿದೆ. ಇದು ಹೊಸ ಚರ್ಚೆಯೊಂದಕ್ಕೆ ಎಡೆ ಮಾಡಿಕೊಟ್ಟಿದೆ. ಇಂಟರ್ನೆಟ್ ಬಳಕೆದಾರರ ಗೌಪ್ಯತೆ ಬಗ್ಗೆ ಗುಲ್ಲೆಬ್ಬಿದೆ. ಏನೇ ಆದರೂ ಬಾರತೀಯ ಸೈಬರ್ ಕಾನೂನುಗಳಿಗೆ ಹೊಸ ದಿಶೆ ಬರೆಯಲಿದೆ.
ಭಾರತದ ನೆಟ್ಟಿಗರು ಈ ತೀರ್ಪನ್ನು ಕಾದು ನೋಡುತ್ತಿದ್ದಾರೆ.
Saturday, August 16, 2008
at
2:46 AM
Labels:
ಕಾನೂನು,
ಗೂಗಲ್,
ನೆಟ್,
ಬ್ಲೋಗ್ಗೆರ್ಸ್
Posted by
Suresha
Subscribe to:
Post Comments (Atom)
0 comments:
Post a Comment