ಗೂಗಲ್ ಭಾರತದಲ್ಲಿ ಆರ್ಕುಟ್ ಎಸ್.ಎಂ.ಎಸ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯಿಂದ ಆರ್ಕುಟ್-ನ ಬಳಕೆದಾರರು ತಮ್ಮ ಸ್ನೇಹಿತರ ಜೊತೆಗೆ ಎಸ್.ಎಂ.ಎಸ್ ಮೂಲಕ ಸಂಪರ್ಕಿಸಬಹುದು. ಇದರಿಂದ ಸ್ಕ್ರಾಪ್-ಗಳನ್ನು ಓದಬಹುದು ಮತ್ತು ಸ್ನೇಹಿತರಿಗೆ ಸ್ಕ್ರಾಪ್-ಗಳನ್ನು ಕಳುಹಿಸಬಹುದು. ಅಲ್ಲದೆ ಸ್ನೇಹಿತರ ವಿವರಗಳನ್ನೂ ಪಡೆಯಬಹುದು.
ಈ ಸೇವೆಯು ಬ್ರೆಜಿಲ್ನಲ್ಲಿ ಮೊದಲೇ ಚಾಲ್ತಿಯಲ್ಲಿದ್ದು, ಭಾರತದಲ್ಲಿ ಇತ್ತೀಚೆಗೆ ಪರಿಚಯಿಸಲಾಗಿದೆ.
ಇದನ್ನು ಬಳಸಲು ಆರ್ಕುಟ್-ನ ಸೆಟ್ಟಿಂಗ್ಸ್-ಗೆ ಹೋಗಿ, ಮೊಬೈಲ್ ಟ್ಯಾಬ್-ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಸದ್ಯ ಈ ಸೇವೆ ಕೆಲವೇ ಮೊಬೈಲ್ ಆಪರೇಟರ್-ಗಳಲ್ಲಿ ಲಭ್ಯವಿದೆ. ಅಲ್ಲದೆ ಇದು ಪ್ರಿಮಿಯರ್ ಸೌಲಭ್ಯವಾಗಿದ್ದು ಎಸ್.ಎಂ.ಎಸ್ ಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುವುದು.
ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿ-ಗಳನ್ನೂ ಕ್ಲಿಕ್ಕಿಸಿ.
Thursday, August 7, 2008
at
8:41 AM
Labels:
ಆರ್ಕುಟ್,
ಗೂಗಲ್,
ತಂತ್ರಜ್ಞಾನ,
ಮೊಬೈಲ್
Posted by
Suresha
Subscribe to:
Post Comments (Atom)
0 comments:
Post a Comment